ಡಿ ಕೆ ರವಿ ನೆನಪು ರವಿ ಅಸ್ತಮಿಸಿದೆ ಕಾಣದ ಲೋಕಕೆ. ದೇಹ-ಆತ್ಮ ಮೂಡಿಸಿತು ಜನರಲ್ಲಿ ಪ್ರೀತಿ ಅಭಿಮಾನ. ರವಿಕಿರಣ ಇನ್ನೂ ಮೂಡದೆ ನೊಂದಿತು ಜನಮನ,ಕಣ್ಣೀರಿಟ್ಟಿತ್ತು ಜಗಮಗ. ಬಾರದೇ ಹೋದೆಯೇ ಒ ರವಿಯೇ, ಪ್ರೀತಿಯ ಚಿನ್ನದ ಗಣಿಯೇ. ಈ ನಾಡಿಗೆ ಬರದ ಸಿಡಿಲು ಬಡಿದಿದೆ ನಿಷ್ಠೆ ಕಲಿಸಿದ ಗುರು ನೀ, ಓ ಮರೆಯಾದೆಯೇ ರವಿಯೇ , ಕಾಣದ ಲೋಕಕೆ ಬಹು ಬೇಗನೇ ಹೋದೆಯೇ. ಈ ನಾಡ ಶೋಕ ಸಂಕಟ ಒಳಗಾಗಿದೆ ಓ ನಾಡ ಚಿನ್ನವೇ ಹೆಬ್ಬುಲಿಯೇ, ಕಾಣದ ಕೈ ಬೆದರಿಕೆ ಭ್ರಷ್ಟ ವ್ಯವಸ್ಥೆಗೆ ಬಲಿಯಾದೆಯೇ. ಓ ರವಿಯೇ.... ಈ ನಾಡ ಜ್ಯೋತಿಯೇ.