ಪೋಸ್ಟ್‌ಗಳು

ನವೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಏಕಾಂಗಿ  ಓಂಟಿತನಕ್ಕೆ ಒಬ್ಬನೇ ದೊರೆ.  ಅಹಂಕಾರಕ್ಕೆ ಎಲ್ಲಿದೆ ಕೊನೆ. ಕೆಟ್ಟ ಆಲೋಚನೆಗೆ ಏಕಾಂತ ಮಣೆ.  ಸಂಬಂಧಗಳ ಬೆಲೆ ಗೊತ್ತಿಲ್ಲ. ಸೋದರತೆ ಭಾವ ಅವನಿಗಿಲ್ಲ. ಬೇರೋಬ್ಬರ ನೋವು ಅರಿವಿಲ್ಲ. ಅವನ ನೋವು ಅವನಿಗೆ ಬೆಂಕಿ ಜ್ವಾಲೆ ಕಣ್ಣಿಗೆ.
ಮಾತು ಮೌನದ ರಾಗ,ಮಳೆ ಬಂದು ಹರಿಯಿತು ಜೋಗ .ಸುಖ ಶಾಂತಿ ನೆಮ್ಮದಿಯ ಜಾಗ ಇರಬೇಕು ನೋಡಿ ಈಗ .,ಹುಟ್ಟು-ಸಾವು ಜೀವಿಯ ಪ್ರಕೃತಿ ಸಹಜ,ಕಷ್ಟ -ಸುಖ,ಸಿಹಿ-ಕಹಿ ಜೀವನದ ಒಂದು ಭಾಗ .
ಕಿತ್ತು ತಿನ್ನೋ ಬಡತನ ಕೇಳೋರ್ ಯಾರೋ ಈ ದಿನ. ಊಟಕ್ಕಾಗಿ ರೋಧನ ಹಸಿವಂಬ ತೋರಣ. ಸಿರಿವಂತರಿಗೆ ಇಂದು ಸಿಹಿದಿನ ಬಡವರಿಗೆ ಇಂದು ಕಹಿದಿನ. ಬಡವರ ಬದುಕು ಅನ್ನವನ್ನುಂಡು ಸುಖ ನಿದ್ದೆ ಮಾಡುವತನಕ.ಸಿರಿವಂತರ ಬದುಕು ಅನ್ನವನ್ನುಂಡು ಅರಗಿ ನಿದ್ದೆ ಮಾಡುವತನಕ.
ಕಾಣದ ಲೋಕಕ್ಕೆ ಕರೆಯದಿರು ವಿದಿಯೇ. ಸಾಧಿಸುವುದು ಸಾಕಷ್ಟಿದೆ ಕರಗದಿರು ಕಾಲವೇ. ಕೇಳುವುದು ಸಾಗರದಷ್ಟಿದೆ ಮೌನವಾಗದಿರು ಧನಿಯೇ. ಸಾಗುವ ದಾರಿಗೆ ಬೆಳಕಾಗಿರು ದೀಪವೇ. -¤ಪ್ರವೀಣ¤-
ಬೇಲಿ ಹಾರುತಿದೆ ಹೊಲದ ಕಡೆಗೆ .ಜೀವನವು ಸಾಗುತಿದೆ ಭಯದ ನೆರಳಲ್ಲಿ. ಬೆಳಕು ಕೊಡುವ ದೀಪವೇ ಕತ್ತಲನು ಕೊಡುತಿದೆ. ದಾರಿ ತೋರುವ ಗುರುವೇ ತಪ್ಪಿಸುತ್ತಿರುವ ಮಾರ್ಗವ.ದಯ ತೋರು ದೇವನೇ ಈ ಪಾಪದ ಜಗವ. ಕನಸು ಕರಗುತಿದೆ ನಂಬಿಕೆಯ ವಂಚನೆಯಲ್ಲಿ.ಮನಸು ನೊಂದಿದೆ ಪಾಪದ ಕಾರ್ಯದಲ್ಲಿ. ಪ್ರೀತಿ ತಪ್ಪಿದೆ ಚಪಲದ ಆಸೆಗೆ. ಪರಿತಪಿಸಿದೆ ಜೀವವು ತನ್ನದೇ ನೆರಳಲ್ಲಿ .ಪಾಲಿಸು ದೇವನೇ ಈ ಪಾಪದ ಮನವ.