ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರಿನಿರ್ವಾಣ

  ಪರಿನಿರ್ವಾಣ   ಭೌದ್ಧ ಮಹಾಯಾನದ ಮಹಾನಾಯಕನ ಪರಿನಿರ್ವಾಣದ ದಿನವಿಂದು.   ಆ ಮಹಾನಾಯಕ ಕಂಡದ್ದು ಬರೀ ಕಲ್ಲು, ಮುಳ್ಳುಗಳ ದುರ್ಗಮ ಹಾದಿಯನ್ನೇ ಸಾಗಬೇಕಿದ್ದ ಅನಂತ ದಿಗಂತದ ಹಾದಿಯಲ್ಲೇ ಚಿರನಿದ್ದೆಗೆ ಜಾರಿದ ದಿನವಿಂದು. ಭಗವಾನ್ ಬುದ್ದನ ಶಾಂತಿಯ ತೋಟದಲ್ಲಿ ಬಾಬಾ ಸಾಹೇಬರು ಹೂ, ಕಾಯಿ, ಹಣ್ಣುಗಳನ್ನು ಬೆಳೆದರು. ಈಗ ಆ ತೋಟಕ್ಕೆ ನೀರೆರೆಯುವರೇ   ಇಲ್ಲ? ಬರೀ ಫಲವ ಪಡೆಯುವವರೇ..   ಕತ್ತಲೆಯ ಜನತೆಗೆ ಬೆಳಕು ತೋರಿ ಕಾಣದೇ ಮರೆಯಾದವರು. ಸಮಾನತೆ, ಅಸ್ಪೃಶ್ಯತೆ ನಿವಾರಣೆಯ ಕನಸನ್ನು ಕಂಡವರು. ಜಾತೀಯತೆಯ ಬೇರನ್ನು ಕೀಳಲೂ ಹೊರಟವರು. ಮಹಿಳೆಯರ, ನಿರ್ಗತಿಕರ, ಬುಡಕಟ್ಟು, ಅಲೆಮಾರಿಗಳ ಹಕ್ಕುಗಳಿಗೆ ಹೋರಾಡಿ ಮಡಿದ ಮಹಾನ್ ಚೇತನ. ಉಳಿದಿರುವುದು ಮಹಾನಾಯಕನ ನೆನಪುಗಳ ಮಾತ್ರ. ಅವರು ಮಾಡಿದ ಭಾಷಣಗಳೆಷ್ಟೋ ಬರೆದು, ಓದಿದ ಪುಸ್ತಕಗಳ ರಾಶಿಯಷ್ಟೋ ಅವರ ಕನಸುಗಳ ಕೋಟೆಯ ಬಾಗಿಲು, ಕಿಟಕಿಗಳನ್ನು ತೆರೆಯುವವರಿಲ್ಲ, ಜ್ಞಾನಜ್ಯೋತಿಯ ಬೆಳಗುವವರಿಲ್ಲ, ಬರೀ ಮೂರ್ತಿಗಳ ಆರಾಧಕರೇ, ಜ್ಞಾನ-ವಿಜ್ಞಾನ, ಪರಿಜ್ಞಾನವೇ ಇಲ್ಲದೆ ಆಶಯಗಳ ಸರಮಾಲೆಗೆ, ಜ್ಞಾನದ ಅರಿವಿಗೆ ಕೈಹಿಡಿಯುವವರಿಲ್ಲ… ಮಹಾನ್‌ ಚೇತನನಿಗೆ ಇನ್ನೂ ಚೇತನ ಯಾರು? ಈ ದಿನಕ್ಕೆ… ಈ ಕ್ಷಣಕ್ಕೆ….   ನೆನಪುಗಳು ಕಣ್ಣೀರ ತರಿಸುತ್ತವೆ…. ಜೈ ಭೀಮ್‌… ಜೈ…ಭೀಮ್  
  ಒಂಟಿ ಪಯಣ   ದಟ್ಟ ಕಾನನ ಕಣಿವೆಗಳಲ್ಲಿ ಒಂಟಿ ಪಯಣಿಗನು ನಾನು   ನುಡಿ ಗಡಿಗಳ ಎಲ್ಲೆ ಇಲ್ಲ ಎನಗೆ ನನದು ದಿಗಂತದೆಡೆಗೆ ದಿಟ್ಟ ನಡಿಗೆ   ಎಲ್ಲಿಯೂ ನಿಲ್ಲದ ಯಾವುದಕ್ಕೂ ನಿಲುಕದ ಸೋಲನ್ನರಿಯದ ದೀರ್ಘ - ಸುದೀರ್ಘ ನಡಿಗೆ ಕೊಡವೇ ಒಂದಿಷ್ಟು ಕೊಡುಗೆ   ಹಾದಿಯು ಅನಾದಿಯಾಗುವರೆಗೆ ಹಂತ ಅನಂತವಾಗುವರೆಗೆ ಅತ್ತುವೇ - ಇಳಿಯುವೇ ಖುಷಿಯಾಗಿ ಕುಣಿದು ನಲಿವೆ ಅಲ್ಲಲ್ಲಿ ಬಾಯಾರಿ ದಣಿವೆ   ಮುಂದೆ ಸಾಗುತ್ತಲೆ ಇದೇ ಪಯಣ ಒಂಟಿ ಒಬ್ಬಂಟಿಯ ಪಯಣ                                       -ಮ.ನಾ.ಪ್ರವೀಣ      

ಮನದ ಬಂದಾಳ ಪ್ರವೀಣ ಎನ್‌ (ಮ ನಾ ಪ್ರವೀಣ) manada bandala

ಇಮೇಜ್
 
ಇಮೇಜ್
  ಅರಿಯದ ಗಜಲ್‌ಗೊಂದು ಇಣುಕು ನೋಟ     - ಮ.ನಾ.ಪ್ರವೀಣ (ಪ್ರವೀಣ.ಎನ್) ಕೋಲಾರ. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಸರಕಲ್‌ ಗ್ರಾಮದ ಯುವ ಉತ್ಸಾಹಿ ಬರಹಗಾರ ಗೆಳೆಯ ʼ ಅಭಿಷೇಕ್‌ ಬಳೆ ಮಸರಕಲ್‌ ʼ ರಚಿಸಿರುವ “ಗೋರಿ ಮೇಲಿನ ಹೂ” ಗಜಲ್‌ ಸಂಕಲನಕ್ಕೆ ೨೦೧೯ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್‌ ನೀಡಲಾಗುವ ʼ ಪಂಪಮ್ಮ – ಶರಣೇಗೌಡ ವಿರುಪಾಪುರ ʼ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಸಂದರ್ಭದಲ್ಲಿ ಈ ಗಜಲ್‌ ಸಂಕಲನ ಕುರಿತು ಮಾತನಾಡುವುದು ಬಹಳ ಹೆಮ್ಮೆ ಎನಿಸಿ ಮಾತನಾಡುತ್ತಿದ್ದೇನೆ. ʼ ಅಭಿಷೇಕ್‌ ಬಳೆ ʼ ಎಂಬ ಗಜಲ್‌ಕಾರ ತನ್ನ ಬರಹದ ಮೂಲಕ ಗೆಜ್ಜೆ ಕಟ್ಟಿ ಕುಣಿಯಲು ಶುರು ಮಾಡಿದ್ದಾನೆ. ಈ ಕುಣಿತಕ್ಕೆ ನನ್ನ ಸಹೃದಯವು ಮನಸ್ಸು ಏನು ಹೇಳದಿದ್ದರೆ ಉತ್ಪ್ರೇಕ್ಷೆ ಎನಿಸುತ್ತದೆ. ಅಭಿಷೇಕ್ ಬಳೆ ನನಗೆ ರಾಮನಗರದ ಸಮೀಪದಲ್ಲಿ ನಡೆದ ಕಾವ್ಯಕಮ್ಮಟದಲ್ಲಿ ಪರಿಚಯ. ಹೆಚ್ಚೇನು ಮಾತನಾಡದ ಮೌನಿಯಂತಿದ್ದ, ಆದರೆ ಅವನ ಒಂದೆರಡು ಮಾತುಗಳು ಕೇಳಿದೊಡನೆ ಬಹಳ ಪಕ್ವವಾದಂತೆ ತೋರಿತ್ತಿದ್ದ. ಆಗ ಅವನ ಕೆಲವು ಕವನ/ಗಜಲ್ಗಳ ಸಾಲುಗಳನ್ನು ನೋಡಿ ಕೇಳಿ ಖುಷಿಪಟ್ಟಿದೆ. ಇದಾದ ಕೆಲವು ದಿನಗಳ ನಂತರ ಅಭಿಯು ʼ ಗೋರಿ ಮೇಲಿನ ಹೂ ʼ ಗಜಲ್‌ ಸಂಕಲನವನ್ನು ಪ್ರಕಟಿಸಿ ಪ್ರೀತಿಯಿಂದ ಕಳುಹಿಸಿಕೊಟ್ಟು ಪ್ರತಿಕ್ರಿಯಿಸಲು ಹೇಳಿದಾಗ   ʼ ಕನ್ನಡ ಸಾಹಿತ್ಯ ಪರಿಷತ್‌ ʼ ನಿಂದ ದತ್ತಿ ಪ್ರಶಸ್ತಿ ಪುರಸ್ಕಾರ ದೊರೆತ ಈ ಸುಸಂದರ್ಭದಲ್ಲಿ ಈ...