ಒಂಟಿ ಪಯಣ

 

ದಟ್ಟ ಕಾನನ ಕಣಿವೆಗಳಲ್ಲಿ

ಒಂಟಿ ಪಯಣಿಗನು ನಾನು

 

ನುಡಿ ಗಡಿಗಳ ಎಲ್ಲೆ ಇಲ್ಲ ಎನಗೆ

ನನದು ದಿಗಂತದೆಡೆಗೆ ದಿಟ್ಟ ನಡಿಗೆ

 

ಎಲ್ಲಿಯೂ ನಿಲ್ಲದ

ಯಾವುದಕ್ಕೂ ನಿಲುಕದ

ಸೋಲನ್ನರಿಯದ

ದೀರ್ಘ-ಸುದೀರ್ಘ ನಡಿಗೆ

ಕೊಡವೇ ಒಂದಿಷ್ಟು ಕೊಡುಗೆ

 

ಹಾದಿಯು ಅನಾದಿಯಾಗುವರೆಗೆ

ಹಂತ ಅನಂತವಾಗುವರೆಗೆ

ಅತ್ತುವೇ- ಇಳಿಯುವೇ

ಖುಷಿಯಾಗಿ ಕುಣಿದು ನಲಿವೆ

ಅಲ್ಲಲ್ಲಿ ಬಾಯಾರಿ ದಣಿವೆ

 

ಮುಂದೆ ಸಾಗುತ್ತಲೆ ಇದೇ ಪಯಣ

ಒಂಟಿ ಒಬ್ಬಂಟಿಯ ಪಯಣ

                                      -ಮ.ನಾ.ಪ್ರವೀಣ

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ