ಪರಿನಿರ್ವಾಣ

 

ಪರಿನಿರ್ವಾಣ

 

ಭೌದ್ಧ ಮಹಾಯಾನದ

ಮಹಾನಾಯಕನ

ಪರಿನಿರ್ವಾಣದ ದಿನವಿಂದು.

 

ಆ ಮಹಾನಾಯಕ ಕಂಡದ್ದು

ಬರೀ ಕಲ್ಲು, ಮುಳ್ಳುಗಳ ದುರ್ಗಮ ಹಾದಿಯನ್ನೇ

ಸಾಗಬೇಕಿದ್ದ ಅನಂತ ದಿಗಂತದ

ಹಾದಿಯಲ್ಲೇ ಚಿರನಿದ್ದೆಗೆ ಜಾರಿದ ದಿನವಿಂದು.

ಭಗವಾನ್ ಬುದ್ದನ ಶಾಂತಿಯ ತೋಟದಲ್ಲಿ

ಬಾಬಾ ಸಾಹೇಬರು ಹೂ, ಕಾಯಿ, ಹಣ್ಣುಗಳನ್ನು ಬೆಳೆದರು.

ಈಗ ಆ ತೋಟಕ್ಕೆ ನೀರೆರೆಯುವರೇ  ಇಲ್ಲ?

ಬರೀ ಫಲವ ಪಡೆಯುವವರೇ..

 

ಕತ್ತಲೆಯ ಜನತೆಗೆ ಬೆಳಕು ತೋರಿ

ಕಾಣದೇ ಮರೆಯಾದವರು.

ಸಮಾನತೆ, ಅಸ್ಪೃಶ್ಯತೆ ನಿವಾರಣೆಯ ಕನಸನ್ನು ಕಂಡವರು.

ಜಾತೀಯತೆಯ ಬೇರನ್ನು ಕೀಳಲೂ ಹೊರಟವರು.

ಮಹಿಳೆಯರ, ನಿರ್ಗತಿಕರ, ಬುಡಕಟ್ಟು,

ಅಲೆಮಾರಿಗಳ ಹಕ್ಕುಗಳಿಗೆ ಹೋರಾಡಿ ಮಡಿದ

ಮಹಾನ್ ಚೇತನ.

ಉಳಿದಿರುವುದು ಮಹಾನಾಯಕನ ನೆನಪುಗಳ ಮಾತ್ರ.

ಅವರು ಮಾಡಿದ ಭಾಷಣಗಳೆಷ್ಟೋ

ಬರೆದು, ಓದಿದ ಪುಸ್ತಕಗಳ ರಾಶಿಯಷ್ಟೋ

ಅವರ ಕನಸುಗಳ ಕೋಟೆಯ ಬಾಗಿಲು, ಕಿಟಕಿಗಳನ್ನು

ತೆರೆಯುವವರಿಲ್ಲ,

ಜ್ಞಾನಜ್ಯೋತಿಯ ಬೆಳಗುವವರಿಲ್ಲ,

ಬರೀ ಮೂರ್ತಿಗಳ ಆರಾಧಕರೇ,

ಜ್ಞಾನ-ವಿಜ್ಞಾನ, ಪರಿಜ್ಞಾನವೇ ಇಲ್ಲದೆ

ಆಶಯಗಳ ಸರಮಾಲೆಗೆ, ಜ್ಞಾನದ ಅರಿವಿಗೆ

ಕೈಹಿಡಿಯುವವರಿಲ್ಲ…

ಮಹಾನ್‌ ಚೇತನನಿಗೆ ಇನ್ನೂ ಚೇತನ ಯಾರು?

ಈ ದಿನಕ್ಕೆ… ಈ ಕ್ಷಣಕ್ಕೆ….

 

ನೆನಪುಗಳು ಕಣ್ಣೀರ ತರಿಸುತ್ತವೆ….

ಜೈ ಭೀಮ್‌… ಜೈ…ಭೀಮ್

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ