ಬಯಲು ಸೀಮೆ

 ಬಯಲು ಸೀಮೆ

ಈ ಬಯಲು ಸೀಮೆಯ ಬರಡು ನೆಲದಲ್ಲಿ.
 ಬಂಗಾರದ ಎಸಳಲಿ ಆಬರಣ ಮಾಡಿದಂತೆ,
 ಹನಿಹನಿಯ ನೀರಲಿ ಬೆಳೆಗಳ ಬೆಳೆಯುವೆವು ಬೆವರ ಹರಿಸಿ ನಾವು .
ತಿಂಗಳು ಕಳೆದರೂ ಮಳೆಹನಿಯ ಕಾಣೆವು ನಾವು .


ಸಾವಿರ ಅಡಿಯವರೆಗೆ ಧರೆಯ ಕೊರೆದರು ನೀರಂತು ಸಿಗಲಿಲ್ಲ
 ಶಾಶ್ವತ ನೀರಾವರಿ ಬೇಕಿದೆ ದಣಿದಿರುವ ಮಡಿಲಿಗೆ ಜಲದಾರೆ ಹರಿಯಬೇಕಿದೆ
 ಮನವನ್ನು ಕೂಡ ತಣಿಸಬೇಕಿದೆ
ಈ ಕಷ್ಟದಲ್ಲೂ ಬೆಳೆವ ಬೆಳೆಗಳಿಗೆ ಬೆಲೆಯೇ ಇಲ್ಲ
 ಕಣ್ಣೀರ ಹರಿಸಿದರೂ ಕೇಳುವವರು ಯಾರಿಲ್ಲ.
 ಈ ಬಯಲು ಸೀಮೆಯ ಕಷ್ಟ ಕೇಳಿರಯ್ಯ..ನೋಡಿರಯ್ಯ..

(ಪ್ರವೀಣ.ಮ.ನಾ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ