ನವ ವಿಶೇಷ

ನವ ವಿಶೇಷ
ನವರಸಗಳು ನವರಾತ್ರಿಯ ನವಜೋಡಿಯ ಮನದಲ್ಲಿನ ಮಹಲುಗಳು.ಕಟ್ಟಲಿರುವ ಕನಸುಗಳ ಕೋಟೆಗಳ ವೈಭವದಲ್ಲಿ.
ನೀಲಿಭಾನು ಕಾಣದಂತೆ ಕವಿದಿರುವ ಕಾರ್ಮೋಡಗಳು.
ಮಳೆಯ ಸಿಂಚನದಿ ಧರೆಯೊಡಲು ಹಸಿರಾಗಿಸಿ.
ನವವಸಂತ ಮಾಸದ ಮೆರುಗನ್ನು ಮುಡಿಸುತಲಿ.ಬಂಜರುತನ ಭಾವವನ್ನು ಬಡಿದೊಡಿಸಿ.
ಫಲವಂತಿಕೆಯ ಪಸಲನ್ನ ಪಡೆಯುತ್ತಲಿ.
ಸಾಧನೆಗಳ ಸವಾಲನ್ನು ಮೆಟ್ಟಿ ನಿಲ್ಲುತಲಿ .
ಬಹಿರಂಗದ ಸಮಾಜದ ಬಲಾತ್ಕಾರ, ಅಂತರಂಗದ ಅಹಂಕಾರ ಬಡಿದೊಡಿಸಿ.
ನವಸಮಾಜ ನಿರ್ಮಾಣ ನವಯುವಕರ ಛಲವಂತಿಕೆಯಲ್ಲಿದೆ .
(ಮ.ನಾ. ಪ್ರವೀಣ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ