ಏಕಾಂಗಿ ಓಂಟಿತನಕ್ಕೆ ಒಬ್ಬನೇ ದೊರೆ. ಅಹಂಕಾರಕ್ಕೆ ಎಲ್ಲಿದೆ ಕೊನೆ. ಕೆಟ್ಟ ಆಲೋಚನೆಗೆ ಏಕಾಂತ ಮಣೆ. ಸಂಬಂಧಗಳ ಬೆಲೆ ಗೊತ್ತಿಲ್ಲ. ಸೋದರತೆ ಭಾವ ಅವನಿಗಿಲ್ಲ. ಬೇರೋಬ್ಬರ ನೋವು ಅರಿವಿಲ್ಲ. ಅವನ ನೋವು ಅವನಿಗೆ ಬೆಂಕಿ ಜ್ವಾಲೆ ಕಣ್ಣಿಗೆ.
ಪೋಸ್ಟ್‌ಗಳು
2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಬೇಲಿ ಹಾರುತಿದೆ ಹೊಲದ ಕಡೆಗೆ .ಜೀವನವು ಸಾಗುತಿದೆ ಭಯದ ನೆರಳಲ್ಲಿ. ಬೆಳಕು ಕೊಡುವ ದೀಪವೇ ಕತ್ತಲನು ಕೊಡುತಿದೆ. ದಾರಿ ತೋರುವ ಗುರುವೇ ತಪ್ಪಿಸುತ್ತಿರುವ ಮಾರ್ಗವ.ದಯ ತೋರು ದೇವನೇ ಈ ಪಾಪದ ಜಗವ. ಕನಸು ಕರಗುತಿದೆ ನಂಬಿಕೆಯ ವಂಚನೆಯಲ್ಲಿ.ಮನಸು ನೊಂದಿದೆ ಪಾಪದ ಕಾರ್ಯದಲ್ಲಿ. ಪ್ರೀತಿ ತಪ್ಪಿದೆ ಚಪಲದ ಆಸೆಗೆ. ಪರಿತಪಿಸಿದೆ ಜೀವವು ತನ್ನದೇ ನೆರಳಲ್ಲಿ .ಪಾಲಿಸು ದೇವನೇ ಈ ಪಾಪದ ಮನವ.