ಜಮೀನು
ಜಮೀನು ಯಾಕ್ರಿ ನೂರು ಎಕರೆ.. ಜಮೀನು ನಿಮಗ. ಹೊಟ್ಟೆ ಹಸಿದಿದೆ ಉಣ್ಣಕ್ಕಿಲ್ಲ ನಮಗ. ಕೋಟಿ.. ಕೋಟಿ.. ಇದ್ದರೂನು ಇನ್ನೂ ಬೇಕು . ಹೆಂಡ್ರು ಮಕ್ಳು ಸಾಕಕ್ಕೆ, ನೀವು ಕೊಡೊ ನೂರಿನ್ನೂರು ಸಾಕಗ್ತಿಲ್ಲ ನಮಗ. ಹಸಿವ ನಿಗಿಸಲು ತುಪ್ಪದ ಊಟ, ಮಾನ ಮುಚ್ಚಲು ದುಬಾರಿ ಬಟ್ಟೆ ಬೇಕಿಲ್ರಿ ನಮಗ . ಬೀಸುವ ಗಾಳಿಯಲ್ಲಿ ಸುರಿಯುವ ಮಳೆಯಲಿ ದಿನವು ಕೆಲಸ ಮಾಡಲೆಬೇಕು ನಾವು. ನಾವ್ಮಡದೆ ಸುಮ್ಮನೆ ಕುಂತ್ರೆ ಉಪವಾಸ ನಮಗೂ. ಕಾಯಕ ಎನ್ನೋದ್ ನಮ್ಮ ಪುಣ್ಯದ ನಮಗೆ ಎಸೆ ಕಷ್ಟವಾದರೂನು ಸಹಿಸ್ಕೊಂಡು ಕೆಲ್ಸ ಮಾಡ್ತಿವ್ ನಾವು... (ಮ.ನಾ.ಪ್ರವೀಣ )