ಕ್ರಾಂತಿ ಪರ್ವ

 ಕ್ರಾಂತಿ ಪರ್ವ
||ನರನಾಟ ಬಲ್ಲದವರು
ನರಿಯ ಮೋಸ ತಿಳಿಯದವರು||

ಸಂಬAಧಗಳು ಕಳಚುತಿವೆ
ಅನಾಚರಗಳು ಕೆರಳುತಿವೆ
ಬಿಡುಗಡೆಯ ಬಯಸುತಿವೆ
ಬಂಧಿಯಾದ ಆ ಮನಗಳು.

ಸಂಕಟವ ತೋರುತಿವೆ
ಸಂತಾಪದ ಮಡುವಿನಲಿ
ದಿಕ್ಕಾರಗಳು ಮಳುಗುತಿವೆ
ಭ್ರಷ್ಟ-ಬಂಧನಗಳ ಭಯದಲ್ಲಿ.

ರಣ-ಕಹಳೆಯು ಮೊಳಗುತಿದೆ
ಯುವಶಕ್ತಿಯ ಛಲ-ಬಲಗಳಲಿ
ಆಕ್ರೋಶವೂ  ಮೂಡುತಿದೆ
ಮುಖ-ಭಾವಗಳ ಬೇಗೆಯಲಿ.

ಸಿಡಿಲ ಕಿಡಿಯು ಅಬ್ಬರಿಸಲಿದೆ
ಜನ ಜೀವನದ ನಡುವಿನಲಿ 
ನಡೆಯಲಿದೆ ರಣರಂಗ
ಅದು ಕೆಲವರಿಗೆ ಚದುರಂಗ.

ಕೇಳಲಿದೆ ಯುವ ಜಯಘೋಷ
ಬಿಡುಗಡೆಯ ಯಮಪಾಷ
ನಡುಗಲಿದೆ ಭೂಮಿ ಆಕಾಶ
ಇದುವೇ ಬದಲಾವಣೆಯ ಪರ್ವ...ಕ್ರಾಂತಿ ಪರ್ವ.

                            ಮ.ನಾ.ಪ್ರವೀಣ






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ