ಬೆಂಕಿ ಮಳೆ..ಬೆಂಕಿ ಮಳೆ.. ಬರಬಾರದೇ ಈ ಬರದ ಧರೆಗೆ, ಒಣಮರವು ಉರಿದು ಹೊಸಚಿಗುರು ಬೆಳೆದು, ಹಸಿರು ನೆಲವಾಗಿಸಬಾರದೇ ಒಡಕಿನ ಈ ಧರೆಗೆ, ನೀರಹರಿಸಬಾರದೇ ಸುತ್ತ ಹಸಿರ ಹಾಸು ಕಂಗೋಳಿಸಬಾರದೇ, ಓ ಮಳೆಯೇ..ಜಡಿಮಳೆಯೇ ..ಬರ ಧರೆಯ ಒಡಲ ಹಸಿವ ನೀಗಿಸಿ ಮುಖ ಬಾವಕೆ ಕಳೆ ನೀಡಿದಂತಾದರೆ ಹಸಿರನುಸಿರನು ಧಾರೆಯರೆದಂತಾಗುವುದು. ಪ್ರಾಣಿಪಕ್ಷಿಗಳ ಹಸಿವ ನೀಗಿಸಿ ಸಂತಸ ಗೊಳಿಸಬಾರದೇ, ಬಾ ಮಳೆಯೇ ಬಾ ಬೀರುಸಾಗಿ ಸುರಿಯುತಾ ,ಹಿಬ್ಬನಿಯಪಟಪಟನೆ ಸುರಿಯುತಾ,ಹೊಳಪೇ ಬೆಳಕಾಗಿ ಮೂಡುತಾ ಬಾ ಮಳೆಯೇ ತಂಪು ಗಾಳಿಯನು ಬೀಸುತ, ಮಳೆಯೇ..! ಬೆಂಕಿ ಮಳೆಯೇ..!
ಕನ್ನಡ ರಂಗಭೂಮಿ
ಕನ್ನಡ ರಂಗಭೂಮಿ ಬೆಳವಣಿಗೆಯಲ್ಲಿ ಕೆಳ-ತಳ ವರ್ಗದ ಕಲಾವಿದೆಯರ ಪಾಲ್ಗೊಳ್ಳುವಿಕೆ: ಕನ್ನಡ ರಂಗಭೂಮಿಯ ಉಗಮದ ಕುರಿತು ಸ್ಪಷ್ಟತೆಯಿಲ್ಲದಿದ್ದರೂ, ಅತ್ಯಂತ ಪ್ರಾಚೀನವಾದದ್ದು ಎಂಬುದರಲ್ಲಿ ಸಂದೇಹವಿಲ್ಲ. ನಮಗೆ ದೊರೆತಿರುವ ಕನ್ನಡ ನಾಟಕಗಳಲ್ಲಿ 17ನೇ ಶತಮಾನದಲ್ಲಿ ರಚನೆಯಾದ ಚಿಕ್ಕದೇವರಾಜನ ಅಸ್ಥಾನದಲ್ಲಿದ್ದ ಸಿಂಗರಾರ್ಯನ ‘ಮಿತ್ರವಿಂದಾ ಗೋವಿಂದ’ ನಾಟಕ ಕೃತಿ ಪ್ರಾಚೀನವಾಗಿದೆ. ಇದು ಶ್ರೀಹರ್ಷನ ರತ್ನಾವಳೀ ನಾಟಕದ ಕನ್ನಡ ರೂಪವಾಗಿದೆ. ಇದಕ್ಕಿಂತ ಪ್ರಾಚೀನವಾದ ನಾಟಕ ದೊರೆತಿಲ್ಲವಾದರೂ ಪ್ರಾಚೀನ ಕನ್ನಡ ಸಾಹಿತ್ಯದ ಶಾಸನಗಳಲ್ಲಿ ನಾಟಕದ ಪ್ರಸ್ತಾಪವಾಗಿದೆ. ಆಧುನಿಕ ಕನ್ನಡ ರಂಗಭೂಮಿಯನ್ನು ನಾವು ಸುಮಾರು ಎರಡು ಶತಮಾನಗಳಿಂದ ಈಚೆಗೆ ಕಾಣಬಹುದಾಗಿದೆ. ಈ ಕನ್ನಡ ರಂಗಭೂಮಿಯಲ್ಲಿ ಕಲಾವಿದೆಯರ ಪಾಲ್ಗೊಳ್ಳುವಿಕೆಯು ಆರಂಭಿಕ ದಿನಗಳಲ್ಲಿ ಇರಲಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಸುಮಾರು 150 ವರ್ಷಗಳಿಂದ ಈಚೆಗೆ ವೃತ್ತಿ ನಾಟಕ ಕಂಪನಿಗಳು ಪ್ರಾರಂಭವಾದವು, ಅವುಗಳಲ್ಲಿ ಮೊದಲಿಗೆ ಸ್ತ್ರೀ ಪಾತ್ರಗಳನ್ನು ಪುರುಷರೇ ಅಭಿನಯಿಸುತ್ತಿದ್ದರು. ಇದಾದ ಎರಡು ದಶಕಗಳ ನಂತರ ಮಹಿಳಾ ಕಲಾವಿದೆರನ್ನು ಕೋಣ್ಣೂರು ನಾಟಕ ಕಂಪನಿಯ ಶಿವಮೂರ್ತಿ ಸ್ವಾಮಿಗಳು 1901ರಲ್ಲಿ ಗುಳೇಗುಡ್ಡದ ‘ಯಲ್ಲೂ ಬಾಯಿ’ ಎಂಬುವರನ್ನು ಪರಿಚಯಿಸಿದರು. ಇವರೇ ವೃತ್ತಿ ರಂಗಭೂಮಿಯ ಮೊದಲ ನಟಿ ಎನ್ನುತ್ತಾರೆ. ಕನ್ನಡ ರಂಗಭೂಮಿಗೆ ಕೆಳ-ತಳ ವರ್ಗದ ಕಲಾವಿದೆಯರು ಪಾಲ್ಗೊಳ್ಳುವಿಕೆ ಆರಂಭವಾದದ್...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ