ಯುಗಾದಿ

ಮಾವು ಚಿಗುರಿದೆ,ಬೇವು-ಹೊಂಗೆ ಹೂ ಅರಳಿದೆ.ಯುಗಾದಿಯ ಸಂಭ್ರಮದಲ್ಲಿ. 
ಹಳೆ-ಬೆಳೆ-ಕಳೆಯು ಹೋಗಿದೆ ಹೊಸತನ ಹೊಳಪನು ತಂದಿದೆ.
ಚಳಿಗಾಲ ಮುಗಿದಿದೆ,ಬೇಸಿಗೆ ದಗೆಯು ಹೆಚ್ಚಿದೆ. 
ದಗೆ-ಬೆಗೆಯನ್ನು ತಣ್ಣಿಸಲೆಂದು ಮರ-ಗಿಡಗಳು ಚಿಗುರಿ ತಂಪು ಗಾಳಿಯು ಬೀಸುತಿದೆ. 
ಮಾಮರದ ಅ ತಂಪಿಗೆ ಕೋಗಿಲೆ ಧನಿಯು ಕಂಪನು ನೀಡಿದೆ. 
ಧರೆಗೆ ಸೂರ್ಯಕಿರಣದ ಕಾಂತಿ ಹೆಚ್ಚಿಸುತಿದೆ.
ಪ್ರಕೃತಿಯಿಂದು ಹೊಸಚೈತನ್ಯವ ಮೂಡಿಸಿದೆ.  
ಯುಗಾದಿಯ ಈ ಹೊಸತನದಿಂದ ತನುಮನವು ಹರುಷದಿ ಕುಣಿದಾಡಿದೆ.









ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ