ಭಾನು - ಬಾನು
ಭಾನು ನಾ ಬಾನಿನಲ್ಲಿರುವೇ.....
ಬಾನಿಗೆ ದೀಪವಾದೆನು ನಾ ಭಾನು.
ಭುವಿಗೆ ಕಿರಣವಾದೆನು ನಾ
ಭಾನು.
ಉದಯಿಸುವೆ ನಾ.. ಭಾನು ಮೂಡಣದಲ್ಲಿ.
ಅಸ್ತಮಿಸುವೆ ನಾ.. ಭಾನು ಪಡುವಣದಲ್ಲಿ.
ನಾ ಬರುವೇ ಬಾನಿನ ಎತ್ತರಕೆ.
ನಾ ಬರುವೇ ಭುವಿಯ ಹತ್ತಿರಕೆ.
ಬಾನಿಗೆ ಬೆಳದಿಂಗಳು ಅನುದಿನವು.
ನಾ ಭಾನು ಮನುಜನೆ ಸವಿ ನೀ ದಿನವೂ.
ಭಾನು ನಾ ಬಾನಿಗೆ ಬೆಳಕ ನೀಡಿ.
ಭಾನು ನಾ ಚಂದಿರನಿಗೆ ಪ್ರತಿಬಿಂಬ ನೀಡಿ.
ದಿನ ಮುಂಜಾನೆ ಉದಯಿಸಿ ನಾ ಭಾನು.
ಜೀವಜಾಲಕೆ ಹಸಿರು ಉಸಿರದೆ.
ಭಾನು ನಾ ಬಾನಿನಲ್ಲಿ ಗ್ರಹಣವಾದೆ ವರುಷಕ್ಕೆ .
ಆದರೂ ಚಿಂತೆಯಿಲ್ಲ!
ವರುಷದ ಎಲ್ಲ ದಿನ ಬೆಳಕದೆ ಇ ಭುವಿಗೆ.
ಭಾನು ನಾ... ದಿನ ಬರುವೆ ಹರುಷದಿ ಬೆಳಕ ನೀಡುತಾ.
ಮ.ನಾ ಪ್ರವೀಣ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ