ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾನು - ಬಾನು

ಇಮೇಜ್
ಭಾನು ನಾ ದಿನಾ ಬರುವೇ..... ಭಾನು ನಾ ಬಾನಿನಲ್ಲಿರುವೇ..... ಬಾನಿಗೆ ದೀಪವಾದೆನು ನಾ ಭಾನು.   ಭುವಿಗೆ ಕಿರಣವಾದೆ ನು ನಾ ಭಾನು.   ಉದಯಿಸುವೆ ನಾ.. ಭಾನು ಮೂಡಣದಲ್ಲಿ. ಅಸ್ತಮಿಸುವೆ ನಾ.. ಭಾನು ಪಡುವಣದಲ್ಲಿ.   ನಾ ಬರುವೇ ಬಾನಿನ ಎತ್ತರಕೆ. ನಾ ಬರುವೇ ಭುವಿಯ ಹತ್ತಿರಕೆ. ಬಾನಿಗೆ ಬೆಳದಿಂಗಳು ಅನುದಿನವು. ನಾ ಭಾನು ಮನುಜನೆ ಸವಿ ನೀ ದಿನವೂ. ಭಾನು ನಾ ಬಾನಿಗೆ ಬೆಳಕ ನೀಡಿ. ಭಾನು ನಾ ಚಂದಿರನಿಗೆ ಪ್ರತಿಬಿಂಬ ನೀಡಿ. ದಿನ ಮುಂಜಾನೆ ಉದಯಿಸಿ ನಾ ಭಾನು. ಜೀವಜಾಲಕೆ ಹಸಿರು ಉಸಿರದೆ. ಭಾನು ನಾ ಬಾನಿನಲ್ಲಿ ಗ್ರಹಣವಾದೆ ವರುಷಕ್ಕೆ . ಆದರೂ ಚಿಂತೆಯಿಲ್ಲ! ವರುಷದ ಎಲ್ಲ ದಿನ ಬೆಳಕದೆ ಇ ಭುವಿಗೆ. ಭಾನು ನಾ... ದಿನ ಬರುವೆ ಹರುಷದಿ ಬೆಳಕ ನೀಡುತಾ.                           ಮ.ನಾ ಪ್ರವೀಣ

ಭಾವದ ಧನಿ

ಇಮೇಜ್
ಹಾಗೋ ಹೀಗೊ ಭಾವದ  ಧನಿ ಶುರುವಾಗಿದೆ ಜನಮನವ ತಣಿಸುತಾ....... ತನುಮನದ ಭಾವ ಹಸಿರುಸಿರು ತಾವ ಸಿರಿ ಬೆಳೆಯುತ್ತವ ಚಿಗುರೆಲೆಯ ಜೀವ ಬಾನ ಮಿಂಚ ರವ ಕಣ್ಣಾಂಚಲೆ ನೆರೆವ ಕಾರ್ಮುಗಿಲ ಗುಡುಗು ಸಿಡಿಲ ಘೋರ .                                                            ಮ.ನಾ ಪ್ರವೀಣ

ಬಾಂದಳ

ಇಮೇಜ್
|ಚಳಿ ತಣ್ಣನೆ ಸವಿ ಶೃಂಗಾರವ ಕರೆಕರೆವ ಕರಗಳನು| ನಾ ಹಿಡಿದು ಮುದ್ದಿಸುತ್ತ ನಸು ನಾಚುವ ಆ ಮೊಗವನು ತೆರೆತೆರೆವೆ ನಾ... ಈಗಲೇ ಬಿಡು ನೀ ನಸು ನಾಚಿಕೆಯ ನಿನ್ನ ನಲ್ಲನು ನಾನಾನು. ನಿನೀಗಲೆ ನಾಚಬೇಡ ಗುಳಿಕೆನ್ನೆಯ ತೊರಬೇಡ ಮೋಹ ದಾಹವ ಹೆಚ್ಚಿಸಬೇಡ ಚೆಲುವಿ ನೀನು ಚೆಲುವ ನಾನು. ಬೇರೆ ಏನು ಹೇಳುವೆ ನೀನು ನಿನ್ನ ಮನದ ಅರಸ ನಾನು ಅಂದವೆನು ಚಂದವೆನು ಜೋಡಿಯಿನ್ನು ಅಮರ ಮಾಧುರ ನಮ್ಮ ಬಾಂದಳ. ಮ.ನಾ ಪ್ರವೀಣ

ಜಮೀನು

ಇಮೇಜ್
  ಜಮೀನು ಯಾಕ್ರಿ ನೂರು ಎಕರೆ.. ಜಮೀನು ನಿಮಗ. ಹೊಟ್ಟೆ ಹಸಿದಿದೆ ಉಣ್ಣಕ್ಕಿಲ್ಲ ನಮಗ. ಕೋಟಿ.. ಕೋಟಿ.. ಇದ್ದರೂನು ಇನ್ನೂ ಬೇಕು .  ಹೆಂಡ್ರು ಮಕ್ಳು ಸಾಕಕ್ಕೆ, ನೀವು ಕೊಡೊ ನೂರಿನ್ನೂರು ಸಾಕಗ್ತಿಲ್ಲ ನಮಗ. ಹಸಿವ ನಿಗಿಸಲು ತುಪ್ಪದ ಊಟ, ಮಾನ ಮುಚ್ಚಲು ದುಬಾರಿ ಬಟ್ಟೆ ಬೇಕಿಲ್ರಿ ನಮಗ .  ಬೀಸುವ ಗಾಳಿಯಲ್ಲಿ ಸುರಿಯುವ ಮಳೆಯಲಿ  ದಿನವು ಕೆಲಸ ಮಾಡಲೆಬೇಕು ನಾವು. ನಾವ್ಮಡದೆ ಸುಮ್ಮನೆ ಕುಂತ್ರೆ ಉಪವಾಸ ನಮಗೂ. ಕಾಯಕ ಎನ್ನೋದ್ ನಮ್ಮ ಪುಣ್ಯದ ನಮಗೆ  ಎಸೆ ಕಷ್ಟವಾದರೂನು ಸಹಿಸ್ಕೊಂಡು ಕೆಲ್ಸ ಮಾಡ್ತಿವ್ ನಾವು... (ಮ.ನಾ.ಪ್ರವೀಣ )

ಬಯಲು ಸೀಮೆ

ಇಮೇಜ್
 ಬಯಲು ಸೀಮೆ ಈ ಬಯಲು ಸೀಮೆಯ ಬರಡು ನೆಲದಲ್ಲಿ.  ಬಂಗಾರದ ಎಸಳಲಿ ಆಬರಣ ಮಾಡಿದಂತೆ,  ಹನಿಹನಿಯ ನೀರಲಿ ಬೆಳೆಗಳ ಬೆಳೆಯುವೆವು ಬೆವರ ಹರಿಸಿ ನಾವು . ತಿಂಗಳು ಕಳೆದರೂ ಮಳೆಹನಿಯ ಕಾಣೆವು ನಾವು . ಸಾವಿರ ಅಡಿಯವರೆಗೆ ಧರೆಯ ಕೊರೆದರು ನೀರಂತು ಸಿಗಲಿಲ್ಲ  ಶಾಶ್ವತ ನೀರಾವರಿ ಬೇಕಿದೆ ದಣಿದಿರುವ ಮಡಿಲಿಗೆ ಜಲದಾರೆ ಹರಿಯಬೇಕಿದೆ  ಮನವನ್ನು ಕೂಡ ತಣಿಸಬೇಕಿದೆ ಈ ಕಷ್ಟದಲ್ಲೂ ಬೆಳೆವ ಬೆಳೆಗಳಿಗೆ ಬೆಲೆಯೇ ಇಲ್ಲ  ಕಣ್ಣೀರ ಹರಿಸಿದರೂ ಕೇಳುವವರು ಯಾರಿಲ್ಲ.  ಈ ಬಯಲು ಸೀಮೆಯ ಕಷ್ಟ ಕೇಳಿರಯ್ಯ..ನೋಡಿರಯ್ಯ.. (ಪ್ರವೀಣ.ಮ.ನಾ)

ಗುರು ವಂದನೆ

ಇಮೇಜ್
ಗುರು ವಂದನೆ...  ಗುರು ವಂದನೆ...  ಗುರುವೇ ನಿನಗೆ. ಅಮೂರ್ತ ಶಿಲೆಗೆ ಮೂರ್ತರೂಪವನ್ನು ಕೊಟ್ಟವವನು ನೀನೆ..  ಓ ಗುರುವೇ... ಓ ಪ್ರಭುವೇ... ತಿದ್ದಿ ತೀಡಿ ಅಕ್ಷರವ ಕಲಿಸಿದವನು ನೀನೇ..  ಅಜ್ಞಾನಿಯನ್ನು ವಿಜ್ಞಾನಿಯಾಗಿಸಿದವನು ನೀನು.  ಶಾಂ ತಿ ಸಹನೆ ಸಹಬಾಳ್ವೆ ಪರಿಪಾಠ ಕಲಿಸಿದ ಮಹಾತ್ಮ ನೀನು.   ಬೇಧ ಭಾವ ಮರೆಸಿ ಸ್ನೇಹಹಸ್ತ ಚಾಚಿದವನು ನೀನು.  ಓ ಗುರುವೇ ಓ ಪ್ರಭುವೇ ನಿನಗೆ ವಂದನೆ .   (ಮ.ನಾ. ಪ್ರವೀಣ)

ನವ ವಿಶೇಷ

ಇಮೇಜ್
ನವ ವಿಶೇಷ  ನವರಸಗಳು ನವರಾತ್ರಿಯ ನವಜೋಡಿಯ ಮನದಲ್ಲಿನ ಮಹಲುಗಳು.   ಕಟ್ಟಲಿರುವ ಕನಸುಗಳ ಕೋಟೆಗಳ ವೈಭವದಲ್ಲಿ. ನೀಲಿಭಾನು ಕಾಣದಂತೆ ಕವಿದಿರುವ ಕಾರ್ಮೋಡಗಳು. ಮಳೆಯ ಸಿಂಚನದಿ ಧರೆಯೊಡಲು ಹಸಿರಾಗಿಸಿ.   ನವವಸಂತ ಮಾಸದ ಮೆರುಗನ್ನು ಮುಡಿಸುತಲಿ. ಬಂಜರುತನ ಭಾವವನ್ನು ಬಡಿದೊಡಿಸಿ.   ಫಲವಂತಿಕೆಯ ಪಸಲನ್ನ ಪಡೆಯುತ್ತಲಿ.  ಸಾಧನೆಗಳ ಸವಾಲನ್ನು ಮೆಟ್ಟಿ ನಿಲ್ಲುತಲಿ . ಬಹಿರಂಗದ ಸಮಾಜದ ಬಲಾತ್ಕಾರ,  ಅಂತರಂಗದ ಅಹಂಕಾರ ಬಡಿದೊಡಿಸಿ.  ನವಸಮಾಜ ನಿರ್ಮಾಣ ನವಯುವಕರ ಛಲವಂತಿಕೆಯಲ್ಲಿದೆ .  (ಮ.ನಾ. ಪ್ರವೀಣ)
ಇಮೇಜ್
ಕನ್ನಡ ನಾಡು  ನುಡಿ  ಗರ್ವದಿಂದ ಹೇಳ್.. ಕನ್ನಡ ಪದಗಳ್.. ಈ ನಮ್.. ನುಡಿ,ಜನ,ನೆಲ ಚಂದ.  ಇವೆಲ್ಲವುಗಳ್.. ನಮ್ಮ ಕನ್ನಡ ನಾಡಿಗೆ ಭೂಷಣ.  ಪವಿತ್ರ ಕನ್ನಡ ನಾಡಿನ ನದಿಗಳಿವು ಕಾವೇರಿ,ಕೃಷ್ಣ,ಭೀಮ,  ನೇತ್ರಾವತಿ,ಕಾಳಿ,ತುಂಗೆ-ಭದ್ರೆಗಳ್..  ಕನ್ನಡ ಪದನುಡಿಗಳ್.. ಉಚ್ಚರಿಸು ಉಸಿರು ನಿಲ್ಲುವ ತನಕ, ಪ್ರಾಣಂ ತೆಗೆಯಲಿ ಅಭಿಮಾನವನೆಂದು ಬಿಡಲೊಲ್ಲೆ. ನನ್.. ಜೀವದ ರಕ್ತದಲ್ಲಿಹುದು ಕನ್ನಡದ ಭಕ್ತಿಭಾವ ನಲಿಯುತಾ ಹಾಡುವೆನು  ಕನ್ನಡವ ನನ್.. ಜೀವವಿರುವ ತನಕ.                                                        ಜೈಯೆಂಬೆನು ಕನ್ನಡಕ್ಕೆ, ಜೈಯೆಂಬೆನು ಕನ್ನಡ ನುಡಿ ಸಂಸ್ಕೃತಿಗೆ.  (ಮ.ನಾ.ಪ್ರವೀಣ)
|ಗಾಳಿಯು ಬೀಸುತಿದೆ ಮೂಡಣಕೆ  ತಂಪು ಬಾನಾಗಲಕೆ ಸದ್ದು ಗದ್ದಲವಾಗಿದೆ ಭುವಿಯೆಲ್ಲೆಡೆ ಹಕ್ಕಿಗಳ ಇಂಚರ ಧನಿ ಕೇಳದಾಗಿದೆ|  |ಗಾಳಿ ಬೀಸಿದೆ ಆಗಸದಿ ಮೋಡ ತರಿಸಿದೆ.  ಮೋಡಗಳು ತಾಕಿ ಗುಡುಗು ಸಿಡಿಲು ಬಡಿದಿದೆ  ಮಳೆಯೆಂಬ ಕಳೆಯನು ಭುವಿಯ ತಣಿಸಿದೆ|
ಇಮೇಜ್
ಯುಗಾದಿ ಮಾವು ಚಿಗುರಿದೆ,ಬೇವು-ಹೊಂಗೆ ಹೂ ಅರಳಿದೆ.ಯುಗಾದಿಯ ಸಂಭ್ರಮದಲ್ಲಿ.  ಹಳೆ-ಬೆಳೆ-ಕಳೆಯು ಹೋಗಿದೆ ಹೊಸತನ ಹೊಳಪನು ತಂದಿದೆ. ಚಳಿಗಾಲ ಮುಗಿದಿದೆ,ಬೇಸಿಗೆ ದಗೆಯು ಹೆಚ್ಚಿದೆ.  ದಗೆ-ಬೆಗೆಯನ್ನು ತಣ್ಣಿಸಲೆಂದು ಮರ-ಗಿಡಗಳು ಚಿಗುರಿ ತಂಪು ಗಾಳಿಯು ಬೀಸುತಿದೆ.  ಮಾಮರದ ಅ ತಂಪಿಗೆ ಕೋಗಿಲೆ ಧನಿಯು ಕಂಪನು ನೀಡಿದೆ.  ಧರೆಗೆ ಸೂರ್ಯಕಿರಣದ ಕಾಂತಿ ಹೆಚ್ಚಿಸುತಿದೆ. ಪ್ರಕೃತಿಯಿಂದು ಹೊಸಚೈತನ್ಯವ ಮೂಡಿಸಿದೆ.   ಯುಗಾದಿಯ ಈ ಹೊಸತನದಿಂದ ತನುಮನವು ಹರುಷದಿ ಕುಣಿದಾಡಿದೆ.
ಬೆಂಕಿ ಮಳೆ..ಬೆಂಕಿ ಮಳೆ.. ಬರಬಾರದೇ ಈ ಬರದ ಧರೆಗೆ, ಒಣಮರವು ಉರಿದು ಹೊಸಚಿಗುರು ಬೆಳೆದು, ಹಸಿರು ನೆಲವಾಗಿಸಬಾರದೇ ಒಡಕಿನ ಈ ಧರೆಗೆ, ನೀರಹರಿಸಬಾರದೇ ಸುತ್ತ ಹಸಿರ ಹಾಸು ಕಂಗೋಳಿಸಬಾರದೇ, ಓ ಮಳೆಯೇ..ಜಡಿಮಳೆಯೇ ..ಬರ ಧರೆಯ ಒಡಲ ಹಸಿವ ನೀಗಿಸಿ ಮುಖ ಬಾವಕೆ ಕಳೆ ನೀಡಿದಂತಾದರೆ ಹಸಿರನುಸಿರನು ಧಾರೆಯರೆದಂತಾಗುವುದು. ಪ್ರಾಣಿಪಕ್ಷಿಗಳ ಹಸಿವ ನೀಗಿಸಿ ಸಂತಸ ಗೊಳಿಸಬಾರದೇ, ಬಾ ಮಳೆಯೇ ಬಾ ಬೀರುಸಾಗಿ ಸುರಿಯುತಾ ,ಹಿಬ್ಬನಿಯಪಟಪಟನೆ ಸುರಿಯುತಾ,ಹೊಳಪೇ ಬೆಳಕಾಗಿ ಮೂಡುತಾ ಬಾ ಮಳೆಯೇ ತಂಪು ಗಾಳಿಯನು ಬೀಸುತ, ಮಳೆಯೇ..! ಬೆಂಕಿ ಮಳೆಯೇ..!

ಅರುಣ ಶಾನುಭಾಗ್ ಸವಿನೆನಪಿಗಾಗಿ

ಇಮೇಜ್
¤ಅರುಣ ಶಾನುಭಾಗ್ ಸವಿನೆನಪಿಗಾಗಿ¤ ಅರುಣೋದಯದ ದಿವ್ಯ ದೀಪ.  ಮನಮನಗಳ ಬೆಳಗಿದ ದೀಪ ನಿನ್ನ ಸೇವೆಗೆ ನೀನೆ ಚಿರಋಣಿ. ಓ ಅರುಣ.. ಓ ಅರುಣ.. ಪಾಪದ ಜಗದ ಉರುಳಿಗೆ ಕೊರಳ ನೀಡಿದೆ. ದುಷ್ಟ ಮನದ ಪಾಪ ಕೃತ್ಯಕ್ಕೆ ಬಲಿಯಾದೆ. ದಶಕ ಕಳೆದರು ಮೇಲೆದ್ದು ಮಾತನಾಡದೆ. ವರುಷದಿಂದ ವರುಷಕೆ ಆರೈಕೆ ಪಡೆದೆ. ಮನುಜ ಕುಲವ ಎಚ್ಚರಿಸಿದೆ ನೋವುಗಳನ್ನು ಉಂಡು. ಕರುನಾಡ ಸಿಧ್ದಿ ದೀಪವೇ ಛಲಗಾತಿಯೇ. ದಾದಿಯಾಗಿ ಸೇವೆ ಮಾಡಿ  ದಾದಿಯರಿಂದಲೇ ಸೇವೆ ಪಡೆದೆ ನ್ಯಾಯವಿಂದು ಸಿಗಲಿಲ್ಲ,  ದಯಾಮರಣ ಕೊಡಲಿಲ್ಲ, ಬದುಕಿರುವುದು ಎಷ್ಟು ದಿನ?  ಅನುಮಾನ,ಅಪಮಾನ,ಈ ಜನಕೆ ತಿಳಿಯಲಿಲ್ಲ  ಅರುಣೋದಯದ ದಿವ್ಯ ದೀಪ ಉಜ್ವಲಿಸದೆ ಮರೆಯಾದೆಯೇ  ಹೆಣ್ಣು ಕುಲದ ದಿವ್ಯ ತೇಜವೇ , ಓ ಅರುಣ.. ಓ ಅರುಣ.. ಈ ನಾಡ ಕಿರಣ.  >>ಮ. ನಾ.ಪ್ರವೀಣ<<
ಇಮೇಜ್
ಡಿ ಕೆ ರವಿ ನೆನಪು  ರವಿ ಅಸ್ತಮಿಸಿದೆ ಕಾಣದ ಲೋಕಕೆ. ದೇಹ-ಆತ್ಮ ಮೂಡಿಸಿತು ಜನರಲ್ಲಿ ಪ್ರೀತಿ ಅಭಿಮಾನ.  ರವಿಕಿರಣ ಇನ್ನೂ ಮೂಡದೆ ನೊಂದಿತು ಜನಮನ,ಕಣ್ಣೀರಿಟ್ಟಿತ್ತು ಜಗಮಗ. ಬಾರದೇ ಹೋದೆಯೇ ಒ ರವಿಯೇ, ಪ್ರೀತಿಯ ಚಿನ್ನದ ಗಣಿಯೇ.  ಈ ನಾಡಿಗೆ ಬರದ ಸಿಡಿಲು ಬಡಿದಿದೆ ನಿಷ್ಠೆ ಕಲಿಸಿದ ಗುರು ನೀ, ಓ ಮರೆಯಾದೆಯೇ ರವಿಯೇ , ಕಾಣದ ಲೋಕಕೆ ಬಹು ಬೇಗನೇ ಹೋದೆಯೇ.  ಈ ನಾಡ ಶೋಕ ಸಂಕಟ ಒಳಗಾಗಿದೆ  ಓ ನಾಡ ಚಿನ್ನವೇ ಹೆಬ್ಬುಲಿಯೇ,  ಕಾಣದ ಕೈ ಬೆದರಿಕೆ ಭ್ರಷ್ಟ ವ್ಯವಸ್ಥೆಗೆ ಬಲಿಯಾದೆಯೇ.  ಓ ರವಿಯೇ....  ಈ ನಾಡ ಜ್ಯೋತಿಯೇ.
ಇಮೇಜ್
 ಚೆಲುವೆ   ನಗುನಗುತ್ತಾ ನೀ.. ಬಂದೆ ಚೆಲುವೇ. ನಗುವಿನಲಿ ಪ್ರೀತಿಯ ಸೆಳೆಯುವೇ. ಓ..  ನಗುವ ಹೂ ದುಂಬಿಯಂತೆ. ಮಾವಿನ ತಿರುಳ ಸಿಹಿ ಹಣ್ಣೆ.  ನಗುವ ಚೆಲುವೆ ನೀ ಬಂದೆ ನನ್ನೆಡೆಗೆ. ಮರೆಯುವೆ ಕಷ್ಟದ ಜೀವನವ. ಪಡೆಯುವೆ ಸುಖದ ಜಗವ. ನನ್ನೀ ಬಾಳ ಪ್ರೇಮದ ಮನದಲಿ.  ನಗುವಿನಿಂದ ಯಾಕೋ ಸಂಕೋಚ.  ನನ್ನಲ್ಲಿ ಏನೋ ಉಲ್ಲಾಸ-ಉತ್ಸಾಹ. ಬಾ ಬಾಳ ಬಳಿಗೆ ಬಳಕುತ್ತಾ ಹೆಣ್ಣೆ. ನನ್ನೀ ಸುಖಸಂಸಾರದ ಬಾಳಿಗೆ.  ನಗುವ ಈ ನಯನದ ಗಳಿಗೆ. ಸಂತಸದಿ ಸಾಗುತಾ ಕೊನೆವರಗೆ.  ಓ ಮನದ ಹಾಲು-ಜೇನಿನಂತೆ.  ನಗುವ ನನ್ನೀ ಮನದ ಬದುಕಿಗೆ.  (ಮ.ನಾ.ಪ್ರವೀಣ)